1999

ಪವನ ಪರ್ವ

ಆಂಜನೇಯ ಎಂದರೆ ದಾರಿ ತೋರಿಸುವವನು ಎಂದರ್ಥ. ನಮ್ಮ ಭವ ಸಾಗರವನ್ನು ದಾಟಲು ಅನುಸರಿಸಬೇಕಾದ ದಾರಿಯನ್ನು ತೋರಿಸುವವನು ಸ್ವಾಮಿ ಹನುಮ. ಹನುಮನಿಲ್ಲದ ಅಥವಾ ಹನುಮನ ಗುಡಿಯಿಲ್ಲದ ಊರಿಲ್ಲ. ಅತೀ ಹೆಚ್ಚು ಧರ್ಮೀಯರಿಂದ ಅಥವಾ ಜನರಿಂದ ಪೂಜಿಸಲ್ಪಡುವ, ಆರಾಧಿಸಲ್ಪಡುವ, ಸ್ತುತಿಸಲ್ಪಡುವ, ಕೀರ್ತಿಸಲ್ಪಡುವ ಏಕೈಕ ಹಿಂದೂ ದೇವತೆ ನಮ್ಮ ಸ್ವಾಮಿ ಹನುಮಾನ್. 

ವಿಶೇಷವೆಂದರೆ ಸ್ವಾಮಿ ಹನುಮನ ತತ್ವಗಳನ್ನು ವೈಷ್ಣವರೂ ಒಪ್ಪುತ್ತಾರೆ ಹಾಗೆಯೇ ಶೈವರೂ ಒಪ್ಪುತ್ತಾರೆ. 

ಸ್ವಾಮಿ ಹನುಮನನ್ನು ಕರ್ನಾಟಕದ Icon ಎಂದರೆ ತಪ್ಪಾಗಲಾರದು. ಹನುಮನ ಭಕ್ತರಲ್ಲಿ VIP ಹಾಗೂ VVIP ಇದ್ದಾರೆ. ಅದರಲ್ಲಿ ನರೇಂದ್ರ ಮೋದಿ, ಒಬಾಮ, ಅಮಿತಾಬ್ ಬಚ್ಚನ್ ಹೀಗೆ ಸಾಗರೋಪಾದಿಯಲ್ಲಿ ಭಕ್ತವೃಂದವಿದೆ.   

ಒಬ್ಬ ಮನುಷ್ಯನ ಸರ್ವಾಂಗೀಣ ಬೆಳವಣಿಗೆಗೆ ಹನುಮಾನ್ ಚಾಲೀಸಾ ಬಹಳ ಸಹಾಯಕವಾಗುತ್ತದೆ. 

ಹನುಮಾನ್ ಚಾಲೀಸವನ್ನು ಪಠಿಸುವವರ ಸಂಖ್ಯೆ ಕೋಟ್ಯಾನುಕೋಟಿ. ಆದರೆ ಯಾರಿಗೂ ನಿರೀಕ್ಷಿಸಿದಷ್ಟು ಫಲ ಸಿಗುತ್ತಿಲ್ಲ ಕಾರಣ ಅಭ್ಯಾಸದ ಕ್ರಮದಲ್ಲಿ ಜನರು ಎಡುವುತ್ತಿದ್ದಾರೆ. 

ಆಂಜನೇಯನನ್ನು ನಾವು ಎರಡು ರೀತಿಯಿಂದ ನೋಡಬಹುದು ಹಾಗು ಆರಾಧಿಸಬಹುದು. 

ಪೌರಾಣಿಕ ಕಾಲಘಟ್ಟದ ರಾಮಾಯಣದ ಪಾತ್ರವಾಗಿ ಅಥವಾ ದೇವರಾಗಿ (ಇಹಾರ್ಥ)

ಅಧ್ಯಾತ್ಮ ತತ್ವವಾಗಿ (ಪರಾರ್ಥ)

ಪುರಾಣದಲ್ಲಿ ಬರುವ ರಾಮಾಯಣದಲ್ಲಿ ಕಾಣುವ ಬಹುಮುಖ್ಯ ಪಾತ್ರವೆಂದರೆ ಅದು ಸ್ವಾಮಿ ಹನುಮ. 

  • ಒಳ್ಳೆಯ ಮಗನಾಗಿ 
  • ಅಪ್ರತಿಮ ಶಿಷ್ಯನಾಗಿ 
  • ಶ್ರೇಷ್ಠ ಮಂತ್ರಿಯಾಗಿ
  • ಮಹಾನ್ ರಾಯಭಾರಿಯಾಗಿ
  • ಜ್ಞಾನದ, ಧ್ಯಾನದ ಶಿಖರವಾಗಿ 
  • ಬುದ್ದಿ- ಬಲ – ಚತುರಮತಿಯಾಗಿ 
  • ಯಶಸ್ಸುಗಳ ಪ್ರತೀಕವಾಗಿ 
  • ಸಾಹಸಗಳ ಉತ್ತುಂಗವಾಗಿ 
  • ಎಲ್ಲ ಸದ್ಗುಣಗಳ ಗಣಿಯಾಗಿ 

ಪವನ ಪರ್ವ, 

ಇದು ನಮ್ಮ ಬದುಕನ್ನು ಸುಂದರವಾಗಿಸುವ ಅಧ್ಯಾತ್ಮ ರಾಮಾಯಣದ ಸುಂದರಕಾಂಡ. 

ಇದೊಂದು ಸ್ವಾಮಿ ಹನುಮನ ಹಬ್ಬ ಅಥವಾ ಹನುಮದ್ ವೈಭವದ ಅಧ್ಯಾಯ. 

ಹನುಮಾನ್ ಒಂದು ವ್ಯಕ್ತಿ ಮಾತ್ರವಲ್ಲ, ಅದೊಂದು ತತ್ವ. 

 

Don’t worship the person. Worship the principle. Person may change with time but principle remains the same. ಎಂದು ಡಾ. ಶ್ರೀ ರಾಮಚಂದ್ರ ಗುರೂಜಿಯವರು ಹೇಳುತ್ತಾರೆ. 

 

ವಿದ್ಯಾರ್ಥಿಗಳಿಗೆ ಸ್ಫೂರ್ತಿ  ಅಥವಾ role model ಎಂದರೆ ಅದು ನಮ್ಮ ಸ್ವಾಮಿ ಹನುಮ. ಓದುವ ಕೊನೆಯಲ್ಲಿ ಹನುಮನ ಚಿತ್ರವಿರಬೇಕೇ ಹೊರತು ಸಿನಿಮಾ ತಾರೆಯರಲ್ಲ. 

 

ಪವನ ಪರ್ವ ಶಿಬಿರದಿಂದ ಸ್ವಾಮಿ ಹನುಮರ ತತ್ವಗಳು ಹೇಗೆ ನಮ್ಮ ದೇಹದಲ್ಲಿ ಕೆಲಸ ಮಾಡುತ್ತಿವೆ ಎಂದು ತಿಳಿಯುವುದರ ಜೊತೆಗೆ ಆ ತತ್ವಗಳ ಅರಿಯುವಿಕೆ ಹಾಗು ಉದ್ದೀಪನದಿಂದ ನಾವು ಏನೆಲ್ಲಾ ಸಾಧಿಸಬಹುದೆಂದು ತಿಳಿದುಕೊಳ್ಳಬಹುದು.

 

ಕಲಿಯುಗದ ಜನಕ್ಕೆ ಒಂದು ಆಂಜನೇಯನ ಮಂತ್ರ ಸಾಕೆಂದು ಮಹರ್ಷಿ ಪರಾಶರರು ಪರಾಶರ ಸಂಹಿತೆಯಲ್ಲಿ ಉಲ್ಲೇಖಿಸಿದ್ದಾರೆ. 

 

21 ಎಂಬುದು ಅಧ್ಯಾತ್ಮ ಸಂಖ್ಯೆ. ಅದನ್ನು ಅರ್ಧ ಮಂಡಲ ಎಂದು ಕರೆಯುತ್ತೇವೆ. Modern Neuro-Science ಹೇಳುವಂತೆ 21 ದಿನಗಳ ಕಾಲ ನಾವು ನಿಯಮಿತವಾಗಿ ಏನನ್ನಾದರೂ ಅಭ್ಯಾಸ ಮಾಡಿದರೆ ಅದು ನಮ್ಮ ಸುಪ್ತ ಮನಸ್ಸು ಅಥವಾ Subconscious Mind ಗೆ ತಲುಪಿ ಅಲ್ಲಿಂದ ಅದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಡುತ್ತದೆ. 21 ದಿನಗಳ ಕಾಲ ಡಿಸಂಬರ್ ತಿಂಗಳ ಮೈಕೊರೆಯುವ ಚಳಿಯಲ್ಲಿ ಬ್ರಾಹ್ಮಿಯ 5 ರಿಂದ 6ರ ಪ್ರತಿನಿತ್ಯ ಅಭ್ಯಾಸವು ಸಾಧನೆ ಮಾಡುವವರಿಗೆ ಪರ್ವದ ಕಾಲವಾಗಿದೆ.  

 

ಡಾ. ಶ್ರೀ ರಾಮಚಂದ್ರ ಗುರೂಜಿಯವರು ಈ ಹನುಮಾನ್ ಚಾಲೀಸಾ ಯೋಗವಿಜ್ಞಾನವನ್ನು ಹಾಗು ಅದರ ವೈಜ್ಞಾನಿಕ ಪಠನಾ ಕ್ರಮಗಳನ್ನು ಸುಮಾರು 50 ಸಾವಿರಕ್ಕೂ ಹೆಚ್ಚು ಜನರಿಗೆ ಮಾರ್ಗದರ್ಶನ ಮಾಡಿದ್ದಾರೆ. ಸಾವಿರಾರು ಜನರು ಇದರ ಪ್ರಯೋಜನವನ್ನು ಪಡೆದಿದ್ದಾರೆ. ಶಿಬಿರದಲ್ಲಿ ಕೇವಲ theory ಮಾತ್ರವಲ್ಲದೆ ಅದರ ಪ್ರಾಯೋಗಿಕ ಅನುಭವವನ್ನೂ ಸಹ ಪಡೆಯಬಹುದು. ಬಹಳಷ್ಟು ಯೌಗಿಕ ಪ್ರಾಣಾಯಾಮ ಅಭ್ಯಾಸಗಳನ್ನು ಶಿಬಿರವು ಒಳಗೊಂಡಿರುತ್ತದೆ.   

 

ಹನುಮ ಜಯಂತಿಯು ವರ್ಷದಲ್ಲಿ ಎರಡು ಬಾರಿ ಬರುತ್ತದೆ. ಮೊದಲನೆಯದು ಹನುಮನು ಹುಟ್ಟಿದ ದಿನವೆಂದು (ಉತ್ತರ ಭಾರತೀಯರ ಪ್ರಕಾರ) ಏಪ್ರಿಲ್ ತಿಂಗಳಿನಲ್ಲಿ, ಎರಡನೆಯದು ಲಂಕೆಯನ್ನು ದಹಿಸಿ ಅಹಂಕಾರವನ್ನು ಮೆಟ್ಟಿದ ದಿನವೆಂದು (ದಕ್ಷಿಣ ಭಾರತೀಯರ ಪ್ರಕಾರ) ಡಿಸಂಬರ್ ಮಾಹೆಯಲ್ಲಿ. 

 

ಗಾಯತ್ರಿ ಮಂತ್ರ, ಲಲಿತ ಸಹಸ್ರನಾಮ, ಮೃತ್ಯುಂಜಯ ಮಂತ್ರ ಹೀಗೆ ಸಾವಿರಾರು ಮಂತ್ರಗಳಿದ್ದರೂ ಹನುಮಾನ್ ಚಾಲೀಸವನ್ನು ಯಾಕೆ ಪಠಿಸಬೇಕು? ಆ ಮಂತ್ರವೇ ಯಾಕೆ ಸಾರ್ವಕಾಲಿಕ ಶ್ರೇಷ್ಠ?

 

ಹನುಮಾನ್ ಚಾಲೀಸಾ ಹೇಗೆ ಗುರೂಜಿಯವರ ಬದುಕಿನ ದಿಕ್ಕನ್ನು ಬದಲಿಸಿ ಅವರ ಯಶಸ್ಸು ಹಾಗು ಕೀರ್ತಿಗೆ ಕಾರಣವಾಯಿತೆಂದು ತಿಳಿದುಕೊಂಡು ಅದನ್ನು ನಮ್ಮ ಜೀವನದಲ್ಲಿಯೂ ಅಳವಡಿಸಿಕೊಂಡು ಜಯಶಾಲಿಗಳಾಗಲು ಈ ಶಿಬಿರವು ಸಹಾಯವಾಗುತ್ತದೆ. 

 

ಕಾರ್ಯಾಗಾರದ ವಿಷಯಗಳು 

  • ಹನುಮಾನ್ ಚಾಲೀಸಾ ಪೌರಾಣಿಕ, ಐತಿಹಾಸಿಕ, ಆಧ್ಯಾತ್ಮಿಕ ಹಾಗು ವೈಜ್ಞಾನಿಕ ಹಿನ್ನೆಲೆ
  • ಹನುಮ – ಇವ ನಿಮ್ಮೊಳಗಿನ ಹೀರೊ 
  • ಹನುಮಾನ್ ಚಾಲೀಸಾ ವೈಜಾನಿಕ ಜಪ-ಧ್ಯಾನ ಅನುಷ್ಠಾನಗಳ ಕ್ರಮ
  • ಪೂರ್ವಸಿದ್ಧತೆ ಹೇಗಿರಬೇಕು?
  • ಯಾವ ಸಮಯದಲ್ಲಿ ಪಠನೆ ಮಾಡಬೇಕು?
  • ಯಾವ ಮಾನಸಿಕ ಸ್ಥಿತಿಯಲ್ಲಿ ಹನುಮಾನ್ ಚಾಲೀಸವನ್ನು ಅಭ್ಯಸಿಸಬೇಕು?
  • ಎಷ್ಟು ಬಾರಿ ಪಠನೆ ಮಾಡಬೇಕು?
  • ಯಾವ ದಾಟಿ ಅಥವಾ ರಾಗದಲ್ಲಿ ಪಠಿಸಬೇಕು? 
  • ಆಧುನಿಕ ಅಥವಾ ವೈಜ್ಞಾನಿಕ ವಿಜ್ಞಾನದ ಅಡಿಯಲ್ಲಿ ಪಠನೆ ಹಾಗು ಹನುಮನ ಧ್ಯಾನ ಮಾಡಿದರೆ ಏನೆಲ್ಲಾ Physiological, Neurological, emotional and psychic ಬದಲಾವಣೆಗಳಾಗುತ್ತದೆ?
  • ದಶಪ್ರಾಣಗಳು ಹಾಗೂ ಅವುಗಳ ಕಾರ್ಯವೈಖರಿ
  • ಪಂಚಮುಖಿ ರಹಸ್ಯ 
  • ಹನುಮಾನ್ ಅಷ್ಟೋತ್ತರ 
  • ಹನುಮಾನ್ ಸಾಹಸಗಾಥೆಗಳು 
  • ಬ್ರಹ್ಮೋಪದೇಶ ಮತ್ತು ಹನುಮನ ಧ್ಯಾನ-ದೀಕ್ಷೆ

ಸ್ವಾಮಿ ಹನುಮನನ್ನು ಜಪ – ಧ್ಯಾನ – ಅನುಷ್ಠಾನ ಹಾಗು ಅಧ್ಯಾತ್ಮ ಸಾಧನೆಯ ಮೇರು ಕಿರೀಟವೆಂದರೆ ತಪ್ಪಾಗಲಾರದು. 

ಈ ಎಲ್ಲಾ ಅನುಕರಣನೀಯ ಗುಣಗಳನ್ನು ಹಾಗು ವ್ಯಕ್ತಿತ್ವವನ್ನು ನಾವು ಮೈಗೂಡಿಸಿಕೊಂಡರೆ ನಮ್ಮ ಬದುಕಿನಲ್ಲಿ ಪರಿಪೂರ್ಣತೆಯನ್ನು ಸಾಧಿಸಬಹುದು. 

 

ಈ ಮೇಲಿನವುಗಳು ಮಾತ್ರವಲ್ಲದೆ, ಈವರೆಗೂ ಯಾರೂ ಕೇಳಿರದ ಹಾಗೂ ಯಾರಿಗೂ ಗೊತ್ತಿರದ 

  • ಸ್ವಾಮಿ ಹನುಮರ ಮಾರ್ಮಿಕ ಜನ್ಮರಹಸ್ಯ 
  • ಆಶ್ಚರ್ಯವೆನಿಸುವ ಹನುಮನ ಪ್ರಥಮತೆಗಳು 
  • ಅನುಕರಣನೀಯ ಹಾಗು ಶ್ಲಾಘನೀಯ ಶ್ರೇಷ್ಠ ಗುಣಗಳು 
  • ನ ಭೂತೋ ನ ಭವಿಷ್ಯತ್ ಎನಿಸುವ ಬುದ್ದಿ, ಬಲ, ಯುಕ್ತಿ, ಚತುರತೆ, ಜ್ಞಾನ, ಸಾಧನೆ ಹಾಗು ಸಾಹಸಗಾಥೆಗಳು 
  • ಸ್ವಾಮಿ ಹನುಮರ ಚಿರಂಜೀವನದ ವೈಜ್ಞಾನಿಕ ರಹಸ್ಯ 
  • ಹನುಮನ ಭಕ್ತರಿಗೆ ಹನುಮನಿಂದ ಸಿಗುವ ಅಗಣಿತ ಪ್ರಯೋಜನಗಳು 
  • ಯಾರೂ ಅಲ್ಲಗಳೆಯಲಾಗದ ಒಮ್ಮತ-ಸಮ್ಮತ-ಹನುಮ ಎನಿಸುವ ಅಧ್ಯಾತ್ಮ ತತ್ವಗಳು 

ಕಾರ್ಯಾಗಾರದ ಸಂಭಾವ್ಯ ಪ್ರಯೋಜನಗಳು:

ಆಯುರಾರೋಗ್ಯ ವೃದ್ಧಿ, ಸಂಕಲ್ಪ ಸಿದ್ದಿ, ಕೀರ್ತಿ, ಯಶಸ್ಸು, ಶ್ರೇಯಸ್ಸು, ಪ್ರಗತಿ, ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ, ಚತುರತೆ, ವಾಕ್ಪಟುತ್ವ, ಅತೀಂದ್ರಿಯ ಜ್ಞಾನ ಪ್ರಾಪ್ತಿ, ವ್ಯಕ್ತಿತ್ವ ವಿಕಸನ, ಸ್ಥಾನ-ಮಾನ ಸಮ್ಮಾನ ಇತ್ಯಾದಿ.

 

ಬನ್ನಿ…  ಭಾಗವಹಿಸಿ… 

ಹನುಮನ ಶ್ರೇಷ್ಠ ತತ್ವವನ್ನು ಜಗತ್ತಿಗೆ ಸಾರುವ ಪ್ರಾಯೋಗಿಕ ಅಡಿಗಲ್ಲನ್ನು ಹಾಕುತ್ತಿರುವ ಡಾ. ಶ್ರೀ ರಾಮಚಂದ್ರ ಗುರೂಜಿಯವರಿಂದ ಈ ಮಹೋನ್ನತ ವಿದ್ಯೆಯನ್ನು ಕಲಿತು ಸತ್ಸಮಾಜದ ಭವ್ಯ ಕಟ್ಟಡವನ್ನು ಕಟ್ಟಿ, ಕಪಿಧ್ವಜವನ್ನು, ನೆಟ್ಟು ರೋಗ, ಭಯ, ಚಂಚಲತೆ, ದುಃಖ, ಖಿನ್ನತೆ, ಬಡತನ, ಒತ್ತಡ ಹಾಗು ಕ್ಲೇಶಗಳ ದಾಸ್ಯದಿಂದ ಹೊರಬಂದು ಸ್ವತಂತ್ರರಾಗಿ ಆತ್ಮೋದ್ದಾರದ ಮಾರ್ಗವನ್ನು ಆಧರಿಸೋಣ – ವಿಶ್ವವಂದ್ಯರಾಗೋಣ. 

 

ENROLL NOW